ರಕ್ಷಣ ಆಹಾರವಿಜ್ಞಾನ - 
ರಾಷ್ಟ್ರವೊಂದರ ರಕ್ಷಣೆಯ ಹೊಣೆ ಹೊತ್ತಿರುವ ಸೇನಾಪಡೆಗಳು ಕಾರ್ಯಪ್ರವೃತ್ತವಾಗಿರುವ ಸ್ಥಳಗಳಲ್ಲಿಯ ಹವೆಯ ತೀವ್ರ ವೈಪರೀತ್ಯಗಳನ್ನು ಗಮನಿಸಿ ಸೈನಿಕರ ಮನೋದೈಹಿಕಾರೋಗ್ಯವನ್ನು ಕಾಪಾಡಲು ಅವರಿಗೆ ಒದಗಿಸಬೇಕಾದ ಶಿಷ್ಟ ಆಹಾರಪದಾರ್ಥಗಳನ್ನು ಕುರಿತು ನಡೆಸುವ ವೈಜ್ಞಾನಿಕಾಧ್ಯಯನ (ಡಿಫೆನ್ಸ್ ಫುಡ್ ಸೈನ್ಸ್).

ಸೈನಿಕರು ಅತಿ ದುರ್ಗಮ ಮತ್ತು ಹವಾಗುಣ ತೀವ್ರವಾಗಿ ವ್ಯತ್ಯಯ ಗೊಳ್ಳುವ ಶೀತ ಮತ್ತು ಉಷ್ಣ ಪ್ರದೇಶಗಳಲ್ಲಿ ಕಾರ್ಯನಿರತರಾಗಿರುತ್ತಾರೆ. ಅವರ ಆಹಾರದಲ್ಲಿ ಪೋಷಕಗಳು (ನ್ಯೂಟ್ರಿಯೆಂಟ್ಸ್) ಯಾವ ಪ್ರಮಾಣದಲ್ಲಿ ಇರಬೇಕು ಎಂಬುದು ಆತನ ಮೇಲೆ ಬೀಳುವ ಒತ್ತಡ ಮತ್ತು ದೇಹದ ಅಗತ್ಯಗಳನ್ನು ಅವಲಂಬಿಸಿದೆ. ಸಾಮಾನ್ಯ ವ್ಯಕ್ತಿಯ ಅಗತ್ಯಗಳಿಗಿಂತ ಭಿನ್ನವಾದದ್ದು ಇದು. ರಕ್ಷಣ ಆಹಾರ ವಿಜ್ಞಾನದ ವೈಶಿಷ್ಟ್ಯ ಇರುವುದೇ ಇಲ್ಲಿ. ರಕ್ಷಣ ಆಹಾರಾಧ್ಯಯನದ ಸಲುವಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡ, ಆಸ್ಟ್ರೇಲಿಯ, ಬ್ರಿಟನ್, ಭಾರತ ಮುಂತಾದ ದೇಶಗಳು ವಿಶಿಷ್ಟ ಪ್ರಯೋಗಾಲಯಗಳನ್ನು ಸ್ಥಾಪಿಸಿವೆ. ಉದಾಹರಣೆಗೆ ಸ್ಯಾಟಿಕ್ ಪ್ರಯೋಗಾಲಯ (ಮೆಸಾಚೂಸೆಟ್ಸ್), ಯು.ಎಸ, ಎ.) ರಕ್ಷಣ ಆಹಾರ ವಿe್ಞÁನದ ಸಂಸ್ಥೆ (ಟಾಸ್ಮೇನಿಯ. ಆಸ್ಟ್ರೇಲಿಯ), ಆಹಾರ ಶಿಕ್ಷಣ ಸಂಘಟನೆ (ಇಂಗ್ಲೆಂಡ್) ಹಾಗೂ ರಕ್ಷಣ ಆಹಾರ ಸಂಶೋಧನಾ ಪ್ರಯೋಗಾಲಯ (ಮೈಸೂರು, ಭಾರತ). ಇವುಗಳಲ್ಲಿ ರಕ್ಷಣ ಆಹಾರದ ಬಗ್ಗೆ ವಿಶೇಷ ಅಧ್ಯಯನ ನಡೆಸಲಾಗುತ್ತಿದೆ. ರಕ್ಷಣ ಆಹಾರ ತಂತ್ರe್ಞÁನವನ್ನು (ಡಿಫೆನ್ಸ್ ಪುಡ್ ಟೆಕ್ನಾಲಜಿ) ರೂಪಿಸಿವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶಗಳಿವು. ಆಹಾರದಲ್ಲಿ ಅಧಿಕ ಜೀವಸತ್ವ ಹಾಗೂ ಪೋಷಕಾಂಶಗಳು ಇರಬೇಕು. ತೂಕ ಕಡಿಮೆ ಇದ್ದು ದೀರ್ಘಕಾಲ ಕೆಟ್ಟುಹೋಗದಂತಿದ್ದು ಸೇವನೆಗೆ ಯೋಗ್ಯವಾಗಿರಬೇಕು. ಈ ಬಗ್ಗೆ ಪ್ರಯೋಗ. ಅಧ್ಯಯನ ಮತ್ತು ಸಂಶೋಧನೆಗಳು ಮುಂದುವರಿಯುತ್ತಲೇ ಇವೆ. ದುರ್ಗಮ ಮತ್ತು ದುಃಸ್ಥಿತಿಯ ವಾತಾವರಣದಲ್ಲಿ ಯೋಧರಿಗೆ ನಿರ್ಜಲೀಕೃತ ಸೌಕರ್ಯ ಎಂದರೆ ಸಿದ್ಧ ಆಹಾರ (ರೆಡಿ ಪುಡ್), ನಿರ್ಜಲೀಕೃತ ಹಣ್ಣುಗಳು, ವಿಶೇಷ ಶಕ್ತಿದಾಯಕ ಆಹಾರಗಳು, ತುರ್ತು ಉಡ್ಡಯನಕ್ಕಾಗಿ ನಿರ್ದಿಷ್ಟ ಆಹಾರಗಳು (ದಿನಪಡಿ)- ಇವೆಲ್ಲ ಅವರಿಗೆ ಅತ್ಯವಶ್ಯ. ಯೋಧರು ಅತಿ ಉನ್ನತ ಪ್ರದೇಶಗಳಲ್ಲಿರುವಾಗ ಅಧಿಕ ದೈಹಿಕ ಮತ್ತು ಮಾನಸಿಕ ಒತ್ತಡಗಳ ಪರಿಣಾಮವಾಗಿ ಅವರಿಗೆ ಆಹಾರದ ಬಗೆಗಿನ ಆಸೆ ಮತ್ತು ರುಚಿ ಕಡಿಮೆಯಾಗುವುದು ಸಹಜವೇ. ಎಂದ ಮಾತ್ರಕ್ಕೆ ಆಹಾರ ಸೇವಿಸದಿರುವುದು ಖಂಡಿತ ಅಪಾಯಕ್ಕೆ ಆಹ್ವಾನವಿತ್ತಂತೆಯೇ. ಇವೆಲ್ಲದರ ವಿಶೇಷ ವಿಶ್ಲೇಷಣೆ ಮತ್ತು ಅಂಥ ಪರಿಸ್ಥಿತಿಗಳಿಗೆ ಅನುಗುಣವಾದ ಆಹಾರ ಸಂಯೋಜನೆ, ಗುಣಮಟ್ಟದ ನಿರ್ಧಾರ ಹಾಗೂ ಸೌಲಭ್ಯ ಒದಗಿಸುವುದೇ ರಕ್ಷಣ ಆಹಾರ ವಿe್ಞÁನದ ಕಾರ್ಯ ಮತ್ತು ವ್ಯಾಪ್ತಿ.

	ಕೆಲವೊಂದು ಪರಿಸ್ಥಿಯಲ್ಲಿ ಯೋಧರಿಗೆ ಸಾಮೂಹಿಕ ಭೋಜನಗೃಹ ಲಭಿಸದು. ಅವರಿಗೆ ಅನುಕೂಲವಾಗುವಂತೆ ಸಿದ್ಧ ಆಹಾರವನ್ನು ಪ್ರತಿಯೊಬ್ಬನಿಗೆ ದಿನಪಡಿ ರೂಪದಲ್ಲಿ ಕೊಡುವ ತಂತ್ರe್ಞÁನವನ್ನು ಹಲವಾರು ದೇಶಗಳು ಕಂಡುಕೊಂಡಿವೆ. ಇದರ ಪ್ರಕಾರ ಪ್ರತಿಯೊಬ್ಬ ಸೈನಿಕನಿಗೆ ಒಂದು ಅಥವಾ ಎರಡು ದಿವಸಗಳಿಗೆ ಬೇಕಾಗು ಸಿದ್ಧನಿರ್ಜಲೀಕೃತ ಆಹಾರವನ್ನು ಇರಿಸಲಾಗುತ್ತಿದೆ. ಇದರೊಂದಿಗೆ ಘನೀಕೃತ ಇಂಧನ ಮತ್ತು ಕಡಿಮೆ ವೆಚ್ಚದ ಅತೀ ಚಿಕ್ಕ ಒಲೆಗಳನ್ನೂ ಒದಗಿಸಲಾಗುತ್ತದೆ. ಆತ ಇರುವಲ್ಲೇ ಈ ಸಿದ್ಧ ಆಹಾರಕ್ಕೆ ನಿರ್ದಿಷ್ಟ ಪ್ರಮಾಣದ ನೀರುಬೆರೆಸಿ ಐದು ಮಿನಿಟುಗಳ ಕಾಲ ಬಿಸಿ ಮಾಡಿದಾಗ ಆ ಆಹಾರ ಸೇವನೆಗೆ ಯೋಗ್ಯವಾಗುತ್ತದೆ. ಇಂಥ ದಿಢೀರ್ ಸಿದ್ಧ ಆಹಾರ, ಯೋಧ ಜನರಹಿತ ಪ್ರದೇಶದಲ್ಲಿರುವಾಗ ಶತ್ರುವಲಯ ಹೊಕ್ಕಾಗ, ಅತಿದೂರದವರೆಗೆ ಗಸ್ತು ತಿರುಗುವಾಗ ಇಲ್ಲವೇ ಅಂಥ ಆಹಾರದ ಪೊಟ್ಟಣಗಳನ್ನು ವಿಮಾನದಿಂದ ಆಯಾ ಸ್ಥಳಗಳಿಗೆ ಮೇಲಿಂದ ಹಾಕುವುದಕ್ಕೂ ಅನುಕೂಲವಾಗುತ್ತದೆ. ತಾಜಾಹಣ್ಣು ಮತ್ತು ತರಕಾರಿಗಳನ್ನು ಹಿಮಾಚ್ಚಾದಿತ ಪರ್ವತಪ್ರದೇಶಗಳಿಗೆ (-400ಅ) ಒಯ್ದಾಗ ಅವುಗಳ ಸ್ವಾದ ಉಳಿದಿರುವುದಿಲ್ಲ. ಇದಕ್ಕಾಗಿ ಶೀತಲ ನಿರ್ಜಲೀಕರಣ (ಫ್ರೀಝ್‍ಡ್ರೈಯಿಂಗ್) ತಂತ್ರe್ಞÁನವನ್ನು ಅಳವಡಿಸಿ ಹಣ್ಣಿನ ಹುಡಿಯನ್ನೂ ತರಕಾರಿ ಚೂರುಗಳನ್ನೂ ತಯಾರಿಸಲಾಗುತ್ತದೆ. ವಿಧಾನದ ಸ್ಥೂಲಪರಿಚಯ ಈ ರೀತಿ ಇದೆ; ಸಿದ್ಧ ಆಹಾರ, ತರಕಾರಿ ಅಥವಾ ಹಣ್ಣುಗಳನ್ನು ಶೈತ್ಯದಲ್ಲಿ ಘನೀಕರಿಸಿ ನಿರ್ವಾತ ನಿರ್ಜಲೀಕರಣ ವಿಧಾನದಿಂದ ಅವುಗಳ ತೇವಾಂಶವನ್ನು ತೆಗೆಯಲಾಗುತ್ತದೆ. ಇಂತ ಆಹಾರ ಬಹಳ ಕಾಲ ಕೆಟ್ಟುಹೋಗದೆ ಉಳಿಯುವುದು ಅರ್ಥಾತ್, ಅಧಿಕ ದಾಸ್ತಾನು ಅವಧಿ ಪಡೆದಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಈ ಆಹಾರದ ತೂಕ ಅದರ ಮೂಲತೂಕದ ಸುಮಾರು 1/10 ರಷ್ಟು ಇರುವುದು. ಇದನ್ನು ವಿಮಾನದಲ್ಲಿ ಸಾಗಿಸುವುದು ಸುಲಭ, ಉಪಯೋಗಿಸುವಾಗ ನೀರನ್ನು ಸಿಂಪಡಿಸಿ ಅಥವಾ ನೀರಿನಲ್ಲಿರಿಸಿ ಸೇವಿಸಿದರೆ ಆ ಹಣ್ಣು, ತರಕಾರಿಗಳು ತಾಜಾಮಾಲುಗಳಂತೆಯೇ ರುಚಿ ಮತ್ತು ಸ್ವಾದಯುಕ್ತವಾಗಿರುತ್ತವೆ. ಇದಲ್ಲದೆ ಅನೇಕ ದೇಶಗಳು ಕುರಿಮಾಂಸ ಮತ್ತು ಕೋಳಿಮಾಂಸಗಳನ್ನು ಶೀತಲನಿರ್ಜಲೀಕರಣ ತಂತ್ರe್ಞÁನ ಬಳಸಿ ಯೋಧರಿಗೆ ಕೊಡುತ್ತವೆ. ಅತಿದುರ್ಗಮ ಪ್ರದೇಶಗಳಿಗೆ ತಾಜಾ ಮಾಂಸವನ್ನು ಅದು ಕೆಟ್ಟುಹೋಗದಂತೆ ಸಾಗಿಸುವುದು ಸುಲಭಸಾಧ್ಯವಲ್ಲ. ಈಗ ಸಿದ್ಧಮಾಂಸವನ್ನು ನಿರ್ಜಲೀಕರಿಸಿದಾಗ ಇದು ಯಥಾಪೂರ್ವ ಪೋಷಕಾಂಶಗಳನ್ನೂ ಸ್ವಾದವನ್ನೂ ಪಡೆಯುತ್ತದೆ. ಈ ತಂತ್ರe್ಞÁನಕ್ಕೆ ಅತಿಶಯ ಶಕ್ತಿ ಹೇರಬೇಕಾಗುತ್ತದೆ ಮತ್ತು ಈ ಕೆಲಸ ದುಬಾರಿಯಾದದ್ದು ಕೂಡ.

ಉನ್ನತಪ್ರದೇಶದಲ್ಲಿ ವಾತಾವರಣದ ಒತ್ತಡ ಕಡಿಮೆ ಇರುವುದರಿಂದ ನೀರು ಕಡಿಮೆ ಉಷ್ಣತೆಯಲ್ಲಿ ಕುಡಿಯುತ್ತದೆ. ಉದಾ: ಸುಮಾರು 5000ದಿಂದ 7000 ಮೀ ಎತ್ತರದ ಪ್ರದೇಶದಲ್ಲಿ ನೀರಿನ ಕುದಿಬಿಂದು 85-800ಅ ನಷ್ಟಿರುತ್ತದೆ. ಈ ಉಷ್ಣತೆಯಲ್ಲಿ ಬೇಳೆಕಾಳುಗಳನ್ನು ಬೇಯಿಸುವುದು ಕಷ್ಟಸಾಧ್ಯ. ಇದಕ್ಕಾಗಿಯೂ ಸೌಕರ್ಯಯುತ ಸಿದ್ಧ ಆಹಾರಗಳನ್ನು ಒದಗಿಸಲಾಗುತ್ತದೆ. ಪೂರ್ವಭಾವಿಯಾಗಿ ಬೇಯಿಸಿ ತಯಾರಿಸಿದ ಆಹಾರವನ್ನು ಉಷ್ಣವಾಯು ಕೋಷ್ಠ (ಹಾಟ್ ಏರ್ ಡ್ರೈಯರ್) ಅಥವಾ ಉಷ್ಣ ನಿರ್ವಾತಕೋಷ್ಠಗಳಲ್ಲಿ (ಹಾಟ್ ವ್ಯಾಕ್ಯೂಮ್ ಡ್ರೈಯರ್) ನಿರ್ಜಲೀಕರಿಸಿ ಪ್ಲಾಸ್ಟಿಕ್‍ಚೀಲಗಳಲ್ಲಿ ತುಂಬಿ ಯೋಧರಿಗೆ ಒದಗಿಸಲಾಗುವುದು. ಆದರೆ ಈ ಕಡಿಮೆ ವೆಚ್ಚದ ತಂತ್ರe್ಞÁನದಿಂದ ತಯಾರಾದ ಆಹಾರದಲ್ಲಿ ಜೀವಸತ್ವಗಳ ಅಧಿಕಾಂಶ ನಶಿಸಿಹೋಗುತ್ತವೆ. ಇದರಿಂದಾಗಿ ಯೋಧರು ತಾಜಾ ಆಹಾರ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಅವರ ಆಹಾರದಲ್ಲಿ ಜೀವಸತ್ವಗಳ ಕೊರತೆ ಇದ್ದೆ ಇರುತ್ತದೆ. ಈ ಸಿದ್ಧ ಆಹಾರಕ್ಕೆ ಅಧಿಕ ಜೀವಸತ್ವಗಳ ಕೊರತೆ ಇರುತ್ತದೆ ಇವಕ್ಕೆ ಅಧಿಕ ಜೀವಸತ್ವಗಳನ್ನು ಒದಗಿಸಿ ಈ ಲೋಪವನ್ನು ಹೋಗಲಾಡಿಸುತ್ತಾರೆ. ಶೀತಮಾರುತ ಪ್ರಕೋಪಕ್ಕೆ ಒಳಗಾಗುವುದಿದೆ. ತಮ್ಮ ಶಸ್ತ್ರಾಸ್ತ್ರಗಳ ಜೊತೆಗೆ ಹೆಚ್ಚು ಭಾರದ ಉಣ್ಣೆ ಉಡುಪುಗಳನ್ನು ಅವರು ಧರಿಸಬೇಕಾಗುವುದರಿಂದ ಅವರ ಆಹಾರದಲ್ಲಿ ಕೆಲೊರಿಗಳ ಅಂಶ ಅಧಿಕವಾಗಿರಬೇಕು. ಸಾಮಾನ್ಯ ಅಧ್ಯಾಪಕನಿಗೆ ದಿನವೊಂದಕ್ಕೆ ಸುಮಾರು 2500 ಕೆಲೊರಿಯುಕ್ತ ಆಹಾರ ಕೆಲೊರಿಯುಕ್ತ ಆಹಾರ ಅಗತ್ಯ. ಭಾರ ಹೊತ್ತು ಇಳಿಜಾರಾದ ಹಾಗೂ ಕಡಿಮೆ ಆಮ್ಲಜನಕ (ಆಕ್ಸಿಜನ್) ಪ್ರಮಾಣವಿರುವ ಹಿಮಪ್ರದೇಶದಲ್ಲಿ ಆತ ನಡೆಯುವಾಗ ದೇಹ ಅಧಿಕಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ. ಆಮ್ಲಜನಕದ ಕೊರತೆ ಇರುವುದರಿಂದ ಕೊಬ್ಬುಯುಕ್ತ ಆಹಾರ ರುಚಿಸುವುದೂ ಇಲ್ಲ ಹಾಗೂ ಪಚನವಾಗುವುದೂ ಇಲ್ಲ. ಯೋಧನಲ್ಲಿ ಹೋರಾಟದ ಸಲುವಾಗಿ ಉಂಟಾದ ಗಾಯಗಳು ಶೀಘ್ರವಾಗಿ ಗುಣವಾಗಬೇಕಾದಲ್ಲಿ ಆತ ಗ್ಲುಟಾಮಿಕ್ ಆಮ್ಲಯುಕ್ತ ಆಹಾರ ಸೇವಿಸಬೇಕಾಗುತ್ತದೆ. ಈ ಬಗ್ಗೆ ರಕ್ಷಣಾ ಆಹಾರವಿe್ಞÁನಿಗಳು ದೇಶವಿದೇಶಗಳಲ್ಲಿ ಸಾಕಷ್ಟು ಅಧ್ಯಯನ ನಡೆಸಿರುತ್ತಾರೆ. ಮಲೇಷ್ಯದ ವೈದ್ಯವಿe್ಞÁನ ಸಂಸ್ಥೆಯೊಂದು ತನ್ನ ಸಂಶೋಧನೆಯಲ್ಲಿ ಯೋಧರಿಗೆ ಹಾಗೂ ಹಳ್ಳಿಯ ಜನರಿಗೆ ಬೇಕಾಗುವ ಆಹಾರದ ಪೋಷಕಾಂಶಗಳಲ್ಲಿ ಸಾಕಷ್ಟು ಭಿನ್ನತೆ ಇದೆಯೆಂದು ಖಚಿತಪಡಿಸಿದೆ.

ರಕ್ಷಣ ಆಹಾರ ಸಂಶೋಧನಾ ಪ್ರಯೋಗಾಲಯ, ಮೈಸೂರು: ಭಾರತೀಯ ರಕ್ಷಣಾ ಪಡೆಗಳಿಗೆ ಸಾಕಷ್ಟು ಸೌಕರ್ಯಯುಕ್ತ ಸಿದ್ಧ ಆಹಾರಗಳನ್ನು ಒದಗಿಸುವ ಸಲುವಾಗಿ ಅಧ್ಯಯನ, ಸಂಶೋಧನೆಗಳನ್ನು ಕೈಗೊಳ್ಳಲು ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿ ಸ್ಥಾಪನೆಯಾದ (1961) ಸಂಸ್ಥೆ. ಇಲ್ಲಿ ಆಹಾರ ಜೋಪಾನಿಕೆ ವಿಭಾಗ, ಹಣ್ಣು ತರಕಾರಿ ಮತ್ತು ಕಾಳುಗಳ ಸಂಸ್ಕರಣೆ ವಿಭಾಗ, ಆಹಾರ ತಂತ್ರ e್ಞÁನ ವಿಭಾಗ, ಆಹಾರ ಎಂಜಿನಿಯರಿಂಗ್ ವಿಭಾಗ, ಸೂಕ್ಷ್ಮಜೀವಿವಿe್ಞÁನ ವಿಭಾಗ ಮತ್ತು ಜೀವರಸಾಯನವಿe್ಞÁನ ಎಂಬ ವಿಭಾಗಗಳಿವೆ. ಇಲ್ಲಿನ ಆಹಾರ ವಿe್ಞÁನಿಗಳು ಯುಕ್ತ ತಂತ್ರe್ಞÁನವನ್ನು ಅಳವಡಿಸಿಕೊಂಡು ನಿರ್ಜಲೀಕೃತ ಸಿದ್ಧ ಆಹಾರಗಳನ್ನು ತಯಾರಿಸುವುದರಲ್ಲಿ ನಿರತರಾಗಿದ್ದಾರೆ. ಇಂಥ ಆಹಾರಗಳ ಪೋಷಕಾಂಶಗಳ ಗುಣಮಟ್ಟ ಮತ್ತು ಕೆಡದಿರುವಿಕೆಯ ಸಾಮಧ್ರ್ಯಗಳನ್ನು ಇಲ್ಲಿ ನಿರ್ಧರಿಸಲಾಗುತ್ತದೆ. ಈ ಎಲ್ಲ ಗುಣಗಳ ಮೌಲ್ಯಾಂಕನ ಮಾಡಿ ಆಹಾರಗಳನ್ನು ಸೇನಾಪಡೆಗಳಿಗೆ ಕಳುಹಿಸಲಾಗುತ್ತದೆ. ಈ ಪ್ರಯೊಗಾಲಯ 80ಕ್ಕೂ ಹೆಚ್ಚಿನ ಪ್ರಕಾರದ ಆಹಾರಗಳನ್ನು ತಯಾರಿಸಿದೆ. ಇವುಗಳಲ್ಲಿ ಮುಖ್ಯವಾಗಿ ಆರು ತಿಂಗಳ ಅವಧಿಯತನಕ ಕೆಟ್ಟುಹೋಗದಿರುವ ಚಪಾತಿ, ಒಂದು ವರ್ಷದತನಕದ ದಾಸ್ತಾನುಅವಧಿ ಹೊಂದಿರುವ ನಿರ್ಜಲೀಕೃತ ಬಿಸಿಬೇಳೆಬಾತ್, ಪುಳಿಯೋಗರೆ, ಪುಲಾವ್, ಹಣ್ಣುಗಳ ಪುಡಿಗಳು, ಆವಿಯಲ್ ಮಿಶ್ರಣ, ಹಲ್ವಾ, ಶಕ್ತಿಯುಕ್ತ ಕಡ್ಡಿ (ಬಾರ್) ಮುಂತಾದವು ಹೆಚ್ಚಿನ ಉಪಯೋಗಗಳನ್ನು ಕಂಡಿವೆ. ಭಾರತ ರಷ್ಯ ದೇಶಗಳ ಜಂಟಿ ಅಂತರಿಕ್ಷ ಪ್ರಮಾಣದಲ್ಲಿ ಭಾರತದ ಪ್ರತಿನಿಧಿಗೂ ಅವಶ್ಯವಾದ ಆಹಾರಗಳನ್ನು ಈ ಪ್ರಯೋಗಾಲಯ ತಯಾರಿಸಿ ಒದಗಿಸಿದೆ. ಶಾಂತಿಯಾತ್ರೆಗಳಾದ ದಕ್ಷಿಣದ್ರುವ ಪ್ರಯಾಣ, ಪರ್ವತಾರೋಹಣ, ಲಾತೂರ್ ಭೂಕಂಪನದಿಂದ ನೊಂದವರ ಸನ್ನಿವೇಶ ಇತ್ಯಾದಿ ಸಂದರ್ಭಗಳಲ್ಲೂ ಇಂಥ ನಿರ್ಜಲೀಕೃತ ಸೌಕರ್ಯಯುಕ್ತ ಸಿದ್ಧ ಆಹಾರ ಬಲು ಉಪಯುಕ್ತವೆಂದು ಕಂಡುಬಂದಿದೆ.						    
(ಕೆ.ಎಸ್.ಎಂ.ಎ.ಎನ್).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ